ಮುಂಬೈ: ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲೇ ಸೋತರೂ ಇನ್ನೂ ಟೀಂ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿಯನ್ನೇ ಮುಂದುವರಿಸಿರುವುದನ್ನು ಮಾಜಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ.ವಿರಾಟ್ ಕೊಹ್ಲಿಯನ್ನು ವೆಸ್ಟ್ ಇಂಡೀಸ್ ಸರಣಿಗೂ ನಾಯಕರಾಗಿ ಮುಂದುವರಿಸಿರುವುದನ್ನು ಪ್ರಶ್ನಿಸಿರುವ ಗವಾಸ್ಕರ್ ಟೀಂ ಇಂಡಿಯಾದಲ್ಲಿ ಕೊಹ್ಲಿಗೆ ಅಷ್ಟೊಂದು ಪವರ್ ಫುಲ್ ಸ್ಥಾನ ಯಾಕೆ ಎಂದು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.ಆಂಗ್ಲ ಮಾಧ್ಯಮವೊಂದರ ಅಂಕಣದಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಗವಾಸ್ಕರ್ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ