ಲಕ್ನೋ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಲಕ್ನೋದ ವಾಜಪೇಯಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಮತ್ತು ಸಂಜಯ್ ಮಂಜ್ರೇಕರ್ ಕೂದಲೆಳೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.ಇಬ್ಬರೂ ದಿಗ್ಗಜರು ಕ್ರಿಕೆಟ್ ವೀಕ್ಷಕ ವಿವರಣೆ ನೀಡಲು ಕಾಮೆಂಟರಿ ಬಾಕ್ಸ್ ನ ಒಳಗೆ ಹೋಗುವ ಕೆಲವೇ ಸೆಕೆಂಡುಗಳ ಮೊದಲು ಅಲ್ಲಿನ ಗಾಜು ಒಡೆದು ಬಿದ್ದಿದೆ. ಅರೆಕ್ಷಣ ಮೊದಲು ಹೋಗಿದ್ದರೂ ಸುನಿಲ್ ಗವಾಸ್ಕರ್ ಮತ್ತು ಸಂಜಯ್ ಮಂಜ್ರೇಕರ್ ಗೆ