ಮುಂಬೈ: ಇಂಗ್ಲೆಂಡ್ ವಿರುದ್ಧ ಕಿರು ಮಾದರಿಯ ಕ್ರಿಕೆಟ್ ನಲ್ಲಿ ಕುಲದೀಪ್ ಯಾದವ್ ಮತ್ತು ರೋಹಿತ್ ಶರ್ಮಾ ಭರ್ಜರಿ ಪ್ರದರ್ಶನದ ನಂತರ ಈ ಇಬ್ಬರೂ ಆಟಗಾರರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಒತ್ತಡ ಹೆಚ್ಚಿದೆ. ಮೊನ್ನೆಯಷ್ಟೇ ಸ್ವತಃ ವಿರಾಟ್ ಕೊಹ್ಲಿ, ಕುಲದೀಪ್ ಯಾದವ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಬಗ್ಗೆ ಮಾತನಾಡಿದ್ದರು. ಸ್ವತಃ ಕುಲದೀಪ್ ತಮಗೂ ಈ ಆಸೆಯಿರುವುದಾಗಿ ಹೇಳಿಕೊಂಡಿದ್ದರು.ಇದೀಗ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ಇದೇ ಮಾತು ಹೇಳಿದ್ದಾರೆ.