ನವದೆಹಲಿ: ಕೊನೆಗೂ ಬಿಸಿಸಿಐಗೆ ಹೊಸ ಬಾಸ್ ಗಳ ಆಗಮನವಾಗಿದೆ. ಇಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐಗೆ ಹೊಸದಾಗಿ ನಾಲ್ವರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದೆ. ವಿಶೇಷವೆಂದರೆ ಈ ಆಡಳಿತಾಧಿಕಾರಿಗಳ ಪಟ್ಟಿಯಲ್ಲಿ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಿಯಾನಾ ಎಡುಲ್ಜಿ ಕೂಡಾ ಸೇರಿದ್ದಾರೆ. ಮಾಜಿ ಸಿಎಜಿ ವಿನೋದ್ ರೈ ಬಿಸಿಸಿಐ ಮುಖ್ಯಸ್ಥರಾಗಿರುತ್ತಾರೆ. ಅವರ ಜತೆಗೆ ಎಡುಲ್ಜಿ ಅಲ್ಲದೆ, ಇತಿಹಾಸಜ್ಞ ರಾಮಚಂದ್ರ ಗುಹಾ, ವಿಕ್ರಮ್ ಲಿಮಾಯೆ ಆಡಳಿತಾಧಿಕಾರಿಗಳಾಗಿ ನೇಮಕವಾಗಿದ್ದಾರೆ.ಅಲ್ಲದೆ ಫೆಬ್ರವರಿ 2