ಸುರೇಶ್ ರೈನಾ ನಾನು ಬ್ರಾಹ್ಮಣ ಎಂದಿದ್ದೇ ತಪ್ಪಾಯ್ತು!

ಚೆನ್ನೈ| Krishnaveni K| Last Modified ಗುರುವಾರ, 22 ಜುಲೈ 2021 (09:58 IST)
ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಕಾಮೆಂಟರಿ ಮಾಡುವಾಗ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟಿಗ ಸುರೇಶ್ ರೈನಾ ತಾವು ಎಂದಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
 

ಮೂಲತಃ ಉತ್ತರಪ್ರದೇಶದವರಾದ ರೈನಾ ಕಾಮೆಂಟರಿ ನಡುವೆ ತಮಿಳು ಸಂಸ್ಕೃತಿ ಬಗ್ಗೆ ಮಾತನಾಡುವಾಗ, ನಾನು ಬ್ರಾಹ್ಮಣ, ತಮಿಳು ಸಂಸ್ಕೃತಿಯೂ ಹೆಚ್ಚು ಕಡಿಮೆ ಅದೇ ರೀತಿಯಿದೆ. ನನ್ನ ಸಹ ಕ್ರಿಕೆಟಿಗರನ್ನು ಇಷ್ಟಪಡುತ್ತೇನೆ. ನನಗೆ ತಮಿಳುನಾಡು ಕ್ರಿಕೆಟಿಗರಾದ ಬಾಲಾಜಿ, ಅನಿರುದ್ಧ್ ಶ್ರೀಕಾಂತ್, ಬದರಿನಾಥ್ ಮುಂತಾದವರ ಜೊತೆ ಆಡಿದ್ದೇನೆ’ ಎಂದು ರೈನಾ ಹೇಳಿದ್ದರು.  ಇಷ್ಟಕ್ಕೇ ಕೆಲವರು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.
 
ತಮಿಳು ಸಂಸ್ಕೃತಿ ಎಂದರೆ ಬ್ರಾಹ್ಮಣ ಜಾತಿಯನ್ನು ಯಾಕೆ ಎಳೆದು ತರುತ್ತೀರಿ ಎಂದು ಕೆಲವರು ಕೇಳಿದರೆ, ಮತ್ತೆ ಕೆಲವರು ಹೀಗೆ ಹೇಳಲು ನಿಮಗೆ ನಾಚಿಕೆಯಾಗಬೇಕು ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :