ಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಎ ಗುಂಪಿನ ತಂಡಗಳಿಗೆ ಈ ಬಾರಿ ಮಳೆಯೇ ಶಾಪವಾಗಿದೆ. ಮಳೆಯಿಂದಾಗಿ ಎರಡು ಪಂದ್ಯಗಳು ರದ್ದಾಗಿವೆ.ಭಾರತ-ಪಾಕಿಸ್ತಾನ ಪಂದ್ಯಕ್ಕೇ ಮಳೆ ಭೀತಿಯಿತ್ತು. ಆದರೆ ಅದೃಷ್ಟವಶಾತ್ ಆ ಪಂದ್ಯಗಳು ನಡೆದಿದ್ದವು. ಇದಾದ ಬಳಿಕ ಈಗ ಐರ್ಲೆಂಡ್-ಅಫ್ಘನ್, ಅಸೀಸ್-ಇಂಗ್ಲೆಂಡ್ ಪಂದ್ಯಗಳು ಸತತವಾಗಿ ಮಳೆಯಿಂದಾಗಿ ರದ್ದಾಗಿವೆ.ಇದು ಅಂಕಪಟ್ಟಿಯ ಮೇಲೆ ಪರಿಣಾಮ ಬೀರಲಿವೆ. ಅದರಲ್ಲೂ ಅಫ್ಘಾನಿಸ್ತಾನಕ್ಕೆ ಮಳೆಯಿಂದಾಗಿ ಎರಡೂ ಪಂದ್ಯಗಳು ರದ್ದಾಗಿವೆ. ಆಸ್ಟ್ರೇಲಿಯಾ ಮೊದಲ ಪಂದ್ಯ ಸೋತಿದ್ದರಿಂದ ಇಂಗ್ಲೆಂಡ್ ವಿರುದ್ಧದ ಪಂದ್ಯ ಮಹತ್ವದ್ದಾಗಿತ್ತು.