ಪರ್ತ್: ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋತಿರುವುದರಿಂದ ಪಾಕಿಸ್ತಾನದ ಸೆಮಿಫೈನಲ್ ಆಸೆ ಕ್ಷೀಣವಾಗಿದೆ. ಇದೀಗ ಭಾರತವೂ ಸೆಮಿಫೈನಲ್ ಗಾಗಿ ಇನ್ನೊಂದು ಗೆಲುವು ಕಾಣಬೇಕಾಗಿದೆ.ಒಂದು ವೇಳೆ ಆಫ್ರಿಕಾ ವಿರುದ್ಧ ಭಾರತ ಗೆದ್ದಿದ್ದರೆ ಪಾಕ್ ಸೆಮಿಫೈನಲ್ ಆಸೆ ಜೀವಂತವಾಗಿರುತ್ತಿತ್ತು. ನಿನ್ನೆಯ ಪಂದ್ಯವನ್ನು ಪಾಕ್ ನೆದರ್ಲ್ಯಾಂಡ್ಸ್ ವಿರುದ್ಧ ಗೆದ್ದಿತ್ತು. ಹೀಗಾಗಿ ಒಂದು ವೇಳೆ ಭಾರತ ಗೆದ್ದಿದ್ದರೆ ಪಾಕ್ ಕೂಡಾ ಸೆಮಿಫೈನಲ್ ರೇಸ್ ನಲ್ಲಿರುತ್ತಿತ್ತು.ಆದರೆ ಈಗ ಭಾರತ ಸೋತಿರುವುದರಿಂದ ಈಗ ಬಾಂಗ್ಲಾದೇಶದ ವಿರುದ್ಧದ ಪಂದ್ಯ ಮಹತ್ವದ್ದಾಗಿದೆ.