ಅಡಿಲೇಡ್: ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಇಂದು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಪಂದ್ಯವಾಡಲಿದೆ.ಬಿ ಗುಂಪಿನ ಅಗ್ರ ಸ್ಥಾನಿಯಾಗಿರುವ ಭಾರತಕ್ಕೆ ಎ ಗುಂಪಿನ ಎರಡನೇ ಸ್ಥಾನಿ ಇಂಗ್ಲೆಂಡ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ. ಆದರೆ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ನಲ್ಲಿ ಆರಂಭದ್ದೇ ಚಿಂತೆ. ರಾಹುಲ್ ಮಿಂಚಿದರೆ ರೋಹಿತ್ ಕೈಕೊಡುತ್ತಿದ್ದಾರೆ. ರೋಹಿತ್ ಮಿಂಚಿದರೆ ರಾಹುಲ್ ಕೈ ಕೊಡುತ್ತಿದ್ದಾರೆ. ಸೆಮಿಫೈನಲ್ ನಂತಹ ಮಹತ್ವದ ಘಟ್ಟದಲ್ಲಿ ರೋಹಿತ್-ರಾಹುಲ್ ಸ್ಪೋಟಕ ಆರಂಭ ಒದಗಿಸುವುದು ಮುಖ್ಯವಾಗುತ್ತದೆ.