ದುಬೈ: ಮುಂಬರುವ ಟಿ20 ವಿಶ್ವಕಪ್ ಗೆಲ್ಲುವ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು ಎಂದು ಐಸಿಸಿ ಪ್ರಕಟಿಸಿದೆ.ವಿಶ್ವವಿಜೇತವಾಗಲಿರುವ ತಂಡ ಬರೋಬ್ಬರಿ 1.6 ಮಿಲಿಯನ್ ಡಾಲರ್ ಬಹುಮಾನ ಹಣ ಜೇಬಿಗಿಳಿಸಲಿದೆ ಎಂದು ಐಸಿಸಿ ಹೇಳಿದೆ. ರನ್ನರ್ ಅಪ್ ಆದ ತಂಡ ಇದರ ಅರ್ಧದಷ್ಟು ಹಣ ಗಳಿಸಲಿದೆ.ಇನ್ನು ಸೆಮಿಫೈನಲ್ ತನಕ ತಲುಪಿದ ತಂಡಕ್ಕೆ 400,000 ಡಾಲರ್ ಬಹುಮಾನ ಹಣ ಸಿಗಲಿದೆ. ಅಕ್ಟೋಬರ್ 16 ರಿಂದ ನವಂಬರ್ 13 ರವರೆಗೆ ಆಸ್ಟ್ರೇಲಿಯಾದಲ್ಲಿ ಟೂರ್ನಮೆಂಟ್ ನಡೆಯಲಿದೆ. -Edited