ದುಬೈ: ಟಿ20 ವಿಶ್ವಕಪ್ ನ ನಿನ್ನೆಯ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕರಾದರೆ, ಕೊಹ್ಲಿ ಬೌಲಿಂಗ್ ಮಾಡಿ ಗಮನ ಸೆಳೆದರು. ನಿನ್ನೆಯ ಪಂದ್ಯವನ್ನು ಭಾರತ 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು. ಕಳೆದ ಪಂದ್ಯದಲ್ಲಿ ರೋಹಿತ್ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಈ ಪಂದ್ಯದಲ್ಲಿ ರೋಹಿತ್ ಆಡಿದ್ದಲ್ಲದೆ, ನಾಯಕನಾಗಿ ಕರ್ತವ್ಯ ನಿರ್ವಹಿಸಿದರು. ಬದಲಿಗೆ ಕೊಹ್ಲಿ ಬ್ಯಾಟಿಂಗ್ ನಿಂದ ವಿಶ್ರಾಂತಿ ಪಡೆದರು.ಆದರೆ ಬೌಲರ್ ಆಗಿ ಕಣಕ್ಕಿಳಿದ ಕೊಹ್ಲಿ ಎರಡು ಓವರ್