ದುಬೈ: ಟಿ20 ವಿಶ್ವಕಪ್ 2021 ರಲ್ಲಿ ಟೀಂ ಇಂಡಿಯಾ ಇಂದು ಅಂತಿಮ ಲೀಗ್ ಪಂದ್ಯವನ್ನು ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಆಡಲಿದೆ. ಈ ಪಂದ್ಯದೊಂದಿಗೆ ಟೀಂ ಇಂಡಿಯಾ ಈ ವಿಶ್ವಕಪ್ ಅಭಿಯಾನ ಕೊನೆಗೊಳ್ಳಲಿದೆ.ನಿನ್ನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸುವುದರೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಬಂದ್ ಆಗಿದೆ. ಇದರೊಂದಿಗೆ ಲೀಗ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿ ನಿರಾಸೆ ಅನುಭವಿಸಿದೆ.ಕಳೆದ ಪಂದ್ಯದಲ್ಲಿ ಸ್ಕಾಟ್ ಲೆಂಡ್ ವಿರುದ್ಧ ಭರ್ಜರಿ ಜಯ ಗಳಿಸಿದ್ದ