ದುಬೈ: ಟಿ20 ವಿಶ್ವಕಪ್ ನಲ್ಲಿ ಸತತ ಎರಡು ಸೋಲುಗಳ ಬಳಿಕ ಕೊನೆಗೂ ಟೀಂ ಇಂಡಿಯಾ ಗೆದ್ದುಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧ 66 ರನ್ ಗಳ ಗೆಲುವು ಸಾಧಿಸಿದೆ.ಈ ಭಾರೀ ಅಂತರದ ಗೆಲುವಿನ ಬೆನ್ನಲ್ಲೇ ಭಾರತ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಕನಸು ಜೀವಂತವಾಗಿರಿಸಿದೆ. ನಿನ್ನೆಯ ಪಂದ್ಯದಲ್ಲಿ ಭಾರತ 211 ರನ್ ಗಳ ಬೃಹತ್ ಗೆಲುವಿನ ಗುರಿ ನಿಗದಿಪಡಿಸಿತ್ತು.ಇದನ್ನು ಬೆನ್ನತ್ತಿದ್ದ ಆಫ್ಘನ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಕೆಳ ಕ್ರಮಾಂಕದಲ್ಲಿ ನಾಯಕ