ಪಾರ್ಟ್ ಟೈಂ ಬೌಲರ್ ಗಳಾಗಿ ಚಮಕ್ ಕೊಟ್ಟ ಟೀಂ ಇಂಡಿಯಾ ಕ್ರಿಕೆಟಿಗರು

ಚೆನ್ನೈ| Krishnaveni K| Last Modified ಬುಧವಾರ, 10 ಫೆಬ್ರವರಿ 2021 (08:50 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಾರ್ಟ್ ಟೈಂ ಬೌಲರ್ ಆಗಿ ಕಣಕ್ಕಿಳಿದು ಹರ್ಭಜನ್ ಸಿಂಗ್ ರನ್ನು ಅನುಕರಿಸಿ ಚಮಕ್ ಕೊಟ್ಟಿದ್ದರು. ಈ ರೀತಿ ಟೀಂ ಇಂಡಿಯಾದಲ್ಲಿ ಪಾರ್ಟ್ ಟೈಂ ಬೌಲರ್ ಆಗಿ ಚಮಕ್ ಕೊಟ್ಟವರು ಯಾರೆಲ್ಲಾ ಇದ್ದಾರೆ ಗೊತ್ತಾ?

 
ವಿಕೆಟ್ ಕೀಪರ್ ಆಗಿದ್ದರೂ ಧೋನಿ ಟೆಸ್ಟ್, ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಧೋನಿ ನಿಧಾನಗತಿಯ ವೇಗದ ಬೌಲಿಂಗ್ ಮಾಡಿದ್ದರು. ಪಕ್ಕಾ ಬ್ಯಾಟ್ಸ್ ಮನ್ ಎನಿಸಿಕೊಂಡ ರಾಹುಲ್ ದ್ರಾವಿಡ್ ಕೂಡಾ ಒಮ್ಮೆ ಬೌಲಿಂಗ್ ಮಾಡಿದ್ದರು. ಅವರು ತಮ್ಮ 17 ವರ್ಷದ ವೃತ್ತಿ ಜೀವನದಲ್ಲಿ 20 ಓವರ್ ಬೌಲಿಂಗ್ ಮಾಡಿದ್ದರು. ಗೌತಮ್ ಗಂಭೀರ್ ಕೂಡಾ ಬ್ಯಾಟಿಂಗ್ ಮಾತ್ರ ಬಲ್ಲವರು ಎನಿಸಿಕೊಂಡಿದ್ದರು. ಆದರೆ ಏಕದಿನ ಪಂದ್ಯವೊಂದರಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ್ದರು. ಕೆಲವೊಮ್ಮೆ ಈ ಪಾರ್ಟ್ ಟೈಂ ಬೌಲರ್ ಗಳು ಅಚಾನಕ್ ಆಗಿ ವಿಕೆಟ್ ಕಬಳಿಸಿದ್ದೂ ಇದೆ. ಮತ್ತೆ ಕೆಲವೊಮ್ಮೆ ದುಬಾರಿಯಾಗಿದ್ದೂ ಇದೆ. ಆದರೆ ನೀರಸವಾಗಿ ಸಾಗುತ್ತಿರುವ ಪಂದ್ಯದಲ್ಲಿ ಇಂತಹ ಪಾರ್ಟ್ ಟೈಂ ಬೌಲರ್ ಗಳು ರಸದೌತಣ ನೀಡುತ್ತಾರೆ ಎಂಬುದಂತೂ ಸತ್ಯ.
ಇದರಲ್ಲಿ ಇನ್ನಷ್ಟು ಓದಿ :