ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ರಿಂದ ಮುನ್ನಡೆ ಗಳಿಸಿದೆ. ಇದೀಗ ಭಾರತಕ್ಕೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಸುಗಮವಾಗಿದೆ. ಭಾರತಕ್ಕೆ ಇದೀಗ ಫೈನಲ್ಸ್ ನಲ್ಲಿ ಸ್ಥಾನ ಭದ್ರಪಡಿಸಲು ಏನು ಮಾಡಬೇಕು ಎಂಬುದು ಸದ್ಯದ ಪ್ರಶ್ನೆ. ಅಂಕದ ಲೆಕ್ಕಾಚಾರ ನೋಡಿದರೆ ಭಾರತಕ್ಕೆ ಈಗ ಒಂದು ಗೆಲುವು ಅಥವಾ ಡ್ರಾ ಸಾಕು.ಅಂತಿಮ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದರೂ ಸಾಕು.