ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯ ಸೋತ ಮೇಲೂ ಟೀಂ ಇಂಡಿಯಾ ಸುಧಾರಿಸಿಲ್ಲ ಎನ್ನುವುದು ಮೂರನೇ ಟೆಸ್ಟ್ ನ ಮೊದಲ ಅವಧಿಯಲ್ಲೇ ಸಾಬೀತಾಗಿದೆ. ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಈ ಪಂದ್ಯದಲ್ಲಾದರೂ ಬ್ಯಾಟಿಂಗ್ ಸುಧಾರಿಸೀತು ಎಂಬ ಆಶಾಭಾವನೆ ಇದರೊಂದಿಗೆ ನುಚ್ಚುನೂರಾಗಿದೆ. ಕೊಹ್ಲಿ ಅಷ್ಟೊಂದು ಭರವಸೆಯಲ್ಲಿ ಆಯ್ಕೆ ಮಾಡಿದ್ದ