ಬೆಂಗಳೂರು: ಭಾನುವಾರಕ್ಕೂ ಟೀಂ ಇಂಡಿಯಾಕ್ಕೂ ಅದೇಕೋ ವಾರ ಸರಿ ಬರೋದಿಲ್ಲ ಅಂತ ಕಾಣುತ್ತದೆ. ಹಾಗಾಗಿಯೇ ಭಾರತ ಭಾನುವಾರ ಐಸಿಸಿ ಟೂರ್ನಿ ಫೈನಲ್ ನಡೆದಾಗ ಗೆದ್ದಿದ್ದು ಒಂದೇ ಬಾರಿ. ಉಳಿದೆಲ್ಲಾ ಬಾರಿ ಸೋತಿದೆ! ಹೌದು. ಇತಿಹಾಸ ಕೆದಕುತ್ತಾ ಹೋದರೆ ಇಂತಹದ್ದೊಂದು ಅಪರೂಪದ ಅಂಕಿ ಅಂಶ ದೊರಕುತ್ತದೆ. ಭಾರತ ಇದುವರೆಗೆ ಎರಡು ಏಕದಿನ ವಿಶ್ವಕಪ್, ಎರಡು ಚಾಂಪಿಯನ್ಸ್ ಟ್ರೋಫಿ ಮತ್ತು ಒಂದು ಟಿ-20 ವಿಶ್ವಕಪ್ ಪಂದ್ಯ ಗೆದ್ದಿದೆ. ಅದರಲ್ಲಿ ಕಳೆದ ಬಾರಿಯ