ಇಂಗ್ಲೆಂಡ್ ಸರಣಿಗೆ ಐಪಿಎಲ್ ಹೀರೋಗಳಿಗೆ ಮಣೆ ಹಾಕಿದ ಟೀಂ ಇಂಡಿಯಾ

ಮುಂಬೈ| Krishnaveni K| Last Modified ಭಾನುವಾರ, 21 ಫೆಬ್ರವರಿ 2021 (09:41 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಕಳೆದ ಐಪಿಎಲ್ ಆವೃತ್ತಿಯಲ್ಲಿ ಸದ್ದು ಮಾಡಿದ್ದ ಮೂವರಿಗೆ ಮಣೆ ಹಾಕಲಾಗಿದೆ.

 
ಮುಂಬೈ ಇಂಡಿಯನ್ಸ್ ಪರ ಆಡಿದ್ದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಪಂಜಾಬ್ ಪರ ಆಡಿದ್ದ ರಾಹುಲ್ ತೆವಾತಿಯಾಗೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಲಾಗಿದೆ. ಈ ಸರಣಿಗೆ ಭುವನೇಶ್ವರ್ ಕುಮಾರ್ ಪುನರಾಗಮನವಾಗಿದ್ದು, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಉಳಿದಂತೆ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಐಯರ್, ಶಿಖರ್ ಧವನ್ ತಂಡದಲ್ಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :