ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು, ತಂಡದ ಆಟಗಾರರ ಪಟ್ಟಿ ನೋಡಿ ಅಭಿಮಾನಿಗಳು ಟ್ವಿಟರ್ ಪೇಜ್ ನಲ್ಲಿ ಆಯ್ಕೆಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳಪೆ ಫಾರ್ಮ್ ನಲ್ಲಿರುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಮತ್ತೆ ಅವಕಾಶ ನೀಡಿ ದ.ಆಫ್ರಿಕಾ ಸರಣಿಯಲ್ಲಿ ಆಯ್ಕೆ ಮಾಡಿ ಅವಕಾಶವೇ ನೀಡದ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ರನ್ನು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.