ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 11 ಮಂದಿಯೊಂದಿಗೆ ಕಣಕ್ಕಿಳಿಯಿತಾದರೂ ಆಡಿದ್ದು ಮೂರೇ ಮಂದಿ.ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಉಳಿದವರ ಸಾಧನೆ ಸೊನ್ನೆ. ಒಂದು ವೇಳೆ ವಿರಾಟ್ ಕೊಹ್ಲಿ ತಂಡದಲ್ಲಿ ಇರದೇ ಹೋಗಿರುತ್ತಿದ್ದರೆ ಟೀಂ ಇಂಡಿಯಾದ ಮಾನ ಎಷ್ಟು ಕಾಸಿಗೆ ಹರಾಜಾಗುತ್ತಿತ್ತು ನೋಡಿ. ಬೌಲಿಂಗ್ ನಲ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಪಡೆದುಕೊಂಡಿದ್ದ ಅಷ್ಟೂ ಅನುಭವವನ್ನು ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ