ಮುಂಬೈ: ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್ ಪದಚ್ಯುತಿಯಾಗಿದ್ದು, ಆ ಸ್ಥಾನಕ್ಕೆ ವಿಕ್ರಮ್ ರಾಥೋಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ.ವಿಶ್ವಕಪ್ ವೈಫಲ್ಯಕ್ಕೆ ಸಂಜಯ್ ಬಂಗಾರ್ ತಲೆದಂಡವಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಅದರಂತೇ ಸಂಜಯ್ ಬಂಗಾರ್ ಅವರನ್ನು ವಜಾಗೊಳಿಸಲಾಗಿದ್ದು, ವಿಕ್ರಮ್ ರಾಥೋಡ್ ರನ್ನು ಆಯ್ಕೆ ಸಮಿತಿ ಹೊಸದಾಗಿ ನೇಮಕ ಮಾಡಿದೆ.ಆದರೆ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಭರತ್ ಅರುಣ್ ಮತ್ತು ಆರ್ ಶ್ರೀಧರ್ ಅವರನ್ನೇ ಮುಂದುವರಿಸಲಾಗಿದೆ.