ಕಟಕ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಇಂದು ಬ್ಯಾಟಿಗರು ಕೈಕೊಟ್ಟರು. ಪರಿಣಾಮ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಶಕ್ತವಾಯಿತು.ಇಂದು ಮತ್ತೊಮ್ಮೆ ಟಾಸ್ ಸೋತ ರಿಷಬ್ ಪಂತ್ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಋತುರಾಜ್ ಗಾಯಕ್ ವಾಡ್ ಕೇವಲ 1 ರನ್ ಗೇ ಔಟಾದರು. ಇಶಾನ್ ಕಿಶನ್ 34 ರನ್ ಗಳಿಸಿದರೆ ಶ್ರೇಯಸ್ ಅಯ್ಯರ್ 40 ರನ್ ಗಳಿಸಿದರು.