ರಾಹುಲ್ ದ್ರಾವಿಡ್ ಬರ್ತ್ ಡೇಗೆ ತಕ್ಕ ಉಡುಗೊರೆ ಕೊಟ್ಟ ಟೀಂ ಇಂಡಿಯಾ

ಸಿಡ್ನಿ| Krishnaveni K| Last Modified ಸೋಮವಾರ, 11 ಜನವರಿ 2021 (12:56 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ‘ವಾಲ್’ ರಾಹುಲ್ ದ್ರಾವಿಡ್ ಗೆ ತಕ್ಕ ಜನ್ಮದಿನದ ಉಡುಗೊರೆಯಾಗಿದೆ.

 
ದ್ರಾವಿಡ್ ಎಂದರೆ ಟೆಸ್ಟ್ ಸ್ಪೆಷಲಿಸ್ಟ್. ಇನ್ನೊಂದು ತುದಿಯಲ್ಲಿ ಪಟ ಪಟನೆ ವಿಕೆಟ್ ಉರುಳುತ್ತಿದ್ದರೂ ಶಾಂತ ಮೂರ್ತಿಯಂತೆ ಎದುರಾಳಿಗಳನ್ನು ಕಾಡುತ್ತಿದ್ದವರು. ಅಂಥಾ ವಾಲ್ ದ್ರಾವಿಡ್ ಗೆ ಇಂದು ಜನ್ಮದಿನದ ಸಂಭ್ರಮ. ವಿಶೇಷವೆಂದರೆ ಟೀಂ ಇಂಡಿಯಾ ಪರ ಇಂದು ಬ್ಯಾಟಿಂಗ್ ಮಾಡಿದ ಪೂಜಾರ, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್ ದ್ರಾವಿಡ್ ಬ್ಯಾಟಿಂಗ್ ಶೈಲಿಯಲ್ಲೇ ಆಡಿ ಭಾರತದ ಮಾನ ಕಾಪಾಡಿದರು. ಅದರಲ್ಲೂ ವಿಹಾರಿ ಅಂತೂ ರನ್ ಗಳಿಸದೇ ತೀರಾ ಡಿಫೆಂಡಿವ್ ಆಡಿ ಎದುರಾಳಿಗಳಿಗೆ ಹತಾಶೆ ಮೂಡಿಸಿದರು. ಹೀಗಾಗಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಟೀಂ ಇಂಡಿಯಾದ ಇಂದಿನ ಬ್ಯಾಟಿಂಗ್ ರಾಹುಲ್ ದ್ರಾವಿಡ್ ಬರ್ತ್ ಡೇಗೆ ಪರಿಪೂರ್ಣ ಉಡುಗೊರೆಯಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :