ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಗೆದ್ದುಕೊಂಡ ಟೀಂ ಇಂಡಿಯಾ ಆ ಮೂಲಕ ಏಕದಿನ ಇತಿಹಾಸದಲ್ಲಿ 500 ನೇ ಗೆಲುವು ದಾಖಲಿಸಿತು.ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆಯಿತು. 500 ಗೆಲುವು ದಾಖಲಿಸಿದ ವಿಶ್ವದ ಎರಡನೇ ತಂಡ ಎಂಬ ಕೀರ್ತಿಗೆ ಟೀಂ ಇಂಡಿಯಾ ಭಾಜನವಾಯಿತು.ಇದಕ್ಕೂ ಮೊದಲು ಆಸ್ಟ್ರೇಲಿಯಾ 558 ಗೆಲುವುಗಳೊಂದಿಗೆ ಈ ದಾಖಲೆ ಮಾಡಿತ್ತು. ಆಸ್ಟ್ರೇಲಿಯಾ ಇದುವರೆಗೆ 924 ಏಕದಿನ ಆಡಿದೆ.