ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ ಕೇವಲ 62 ರನ್ ಗಳಿಗೆ ಆಲೌಟ್ ಅಗಿದೆ.ಇದರೊಂದಿಗೆ ಭಾರತದ ಮೊದಲ ಇನಿಂಗ್ಸ್ ಮೊತ್ತದಿಂದ 263 ರನ್ ಗಳ ಹಿನ್ನಡೆ ಅನುಭವಿಸಿದೆ. ವಿಶೇಷವೆಂದರೆ ಕಿವೀಸ್ ಇನಿಂಗ್ಸ್ ಕೇವಲ 2 ಗಂಟೆಯೊಳಗೇ ಸಮಾಪ್ತಿಯಾಗಿದೆ. ಇದಕ್ಕೂ ಮೊದಲು ಕಿವೀಸ್ ಬೌಲರ್ ಅಜಾಜ್ ಪಟೇಲ್ ಟೀಂ ಇಂಡಿಯಾದ ಎಲ್ಲಾ 10 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದರು. ಅದಾದ ಬಳಿಕ