ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಕರಾಮತ್ತಿನಿಂದ ಭರ್ಜರಿಯಾಗಿ 10 ವಿಕೆಟ್ ಗಳ ಗೆಲುವು ಕಂಡಿದೆ.ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕೇವಲ 25.2 ಓವರ್ ಗಳಲ್ಲಿ 110 ರನ್ ಗಳಿಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ ಭರ್ಜರಿ ಬೌಲಿಂಗ್ ನಡೆಸಿ 6 ವಿಕೆಟ್ ತಮ್ಮದಾಗಿಸಿಕೊಂಡರು. ಅದರಲ್ಲೂ ಪ್ರಮುಖ ಬ್ಯಾಟಿಗ ಜೋ ರೂಟ್, ಲಿವಿಂಗ್ ಸ್ಟೋನ್ ರನ್ನು ಶೂನ್ಯಕ್ಕೆ ಪೆವಿಲಿಯನ್