ಹ್ಯಾಮಿಲ್ಟನ್|
Krishnaveni K|
Last Modified ಶನಿವಾರ, 15 ಫೆಬ್ರವರಿ 2020 (10:02 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ಇಲೆವೆನ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿಗಳು ಮೇಲುಗೈ ಸಾಧಿಸಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ಭಾರತ 263 ಕ್ಕೆ ಆಲೌಟ್ ಆಗಿತ್ತು. ನ್ಯೂಜಿಲೆಂಡ್ 235 ಕ್ಕೇ ಸರ್ವಪತನ ಕಂಡಿದೆ. ಭಾರತದ ಪರ ವೇಗಿ ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ನವದೀಪ್ ಸೈನಿ ತಲಾ 2, ಮೊಹಮ್ಮದ್ ಶಮಿ 3 ಮತ್ತು ರವಿಚಂದ್ರನ್ ಅಶ್ವಿನ್ 1 ವಿಕೆಟ್ ಕಬಳಿಸಿದ್ದಾರೆ.
ಈ ಮೂಲಕ ಏಕದಿನ ಪಂದ್ಯದಲ್ಲಿ ಕಳೆಗುಂದಿದ್ದ ಭಾರತೀಯ ಬೌಲಿಂಗ್ ಪಡೆ ಟೆಸ್ಟ್ ಪಂದ್ಯದಲ್ಲಿ ಫಾರ್ಮ್ ಗೆ ಮರಳಿದ ಸೂಚನೆ ನೀಡಿದೆ. ಇದು ಟೀಂ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಲಿದೆ.