ಪಿಚ್ ಮರ್ಮವರಿಯದೇ ಇಂಗ್ಲೆಂಡ್ ಕಕ್ಕಾಬಿಕ್ಕಿ: ಬುದ್ಧಿವಂತಿಕೆ ತೋರಿದ ಟೀಂ ಇಂಡಿಯಾ

ಅಹಮ್ಮದಾಬಾದ್| Krishnaveni K| Last Modified ಗುರುವಾರ, 25 ಫೆಬ್ರವರಿ 2021 (09:41 IST)
ಅಹಮ್ಮದಾಬಾದ್: ಸಾಮಾನ್ಯವಾಗಿ ಹೊನಲು ಬೆಳಕಿನ ಟೆಸ್ಟ್ ಪಂದ್ಯವೆಂದರೆ ವೇಗಿಗಳಿಗೆ ನೆರವಾಗುವ ಪಿಚ್ ಇರುತ್ತದೆ. ಇದೇ ಲೆಕ್ಕಾಚಾರದಲ್ಲಿ ಎಲ್ಲಾ ತಂಡಗಳೂ ಕಣಕ್ಕಿಳಿಯುತ್ತವೆ. ಆದರೆ ಟೀಂ ಇಂಡಿಯಾ ತೋರಿದ ಬುದ್ಧಿವಂತಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

ಇಂಗ್ಲೆಂಡ್ ವಿರುದ್ಧ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಭಾರತ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಭಾರತ ಪಿಚ್ ಪರಿಸ್ಥಿತಿಯನ್ನು ಅರಿತು ಮೂವರು ಸ್ಪಿನ್ನರ್ ಗಳೊಂದಿಗೇ ಕಣಕ್ಕಿಳಿದಿದೆ. ಸಾಮಾನ್ಯವಾಗಿ ವೇಗಿಗಳ ಸಹಕಾರಿಯಾಗುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದ ಪಿಚ್ ಇಲ್ಲಿ ಸ್ಪಿನ್ನರ್ ಗಳಿಗೆ ಸಹಕರಿಸುವ ಮೂಲಕ ಸಾಂಪ್ರದಾಯಿಕ ಪದ್ಧತಿಯನ್ನು ಮುರಿದು ಹೊಸ ಬುನಾದಿ ಹಾಕಿಕೊಟ್ಟಿದೆ. ಆದರೆ ಅತ್ತ ಇಂಗ್ಲೆಂಡ್ ಈ ಲೆಕ್ಕಾಚಾರವನ್ನು ಅರಿಯುವಲ್ಲಿ ಸೋತಿದೆ.
ಇದರಲ್ಲಿ ಇನ್ನಷ್ಟು ಓದಿ :