ಮುಂಬೈ: ಟೀಂ ಇಂಡಿಯಾದ ನೂತನ ಕೋಚ್ ಯಾರು ಎಂಬ ಪ್ರಶ್ನೆಗೆ ಜೂನ್ 10 ರಂದು ಉತ್ತರ ಸಿಗಲಿದೆ. ಹಾಗಂತ ಸ್ವತಃ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.ಜೂನ್ 9 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಾದ ಬಳಿಕ ಜೂನ್ 10 ರಂದು ಮುಂಬೈಯಲ್ಲಿ ಸಂದರ್ಶನ ನಡೆಯುವುದು. ನಂತರ ನೂತನ ಕೋಚ್ ಯಾರೆಂದು ಘೋಷಿಸಲಾಗುವುದು.ಸದ್ಯಕ್ಕೆ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ದೊಡ್ಡ ಗಣೇಶ್ ಅರ್ಜಿ ಹಾಕಿರುವುದು ದೃಢಪಟ್ಟಿದೆ.