ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯವಾಡಿದ ಟೀಂ ಇಂಡಿಯಾ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಅವುಗಳ ಬಗ್ಗೆ ಇಲ್ಲಿದೆ ಒಂದು ಅವಲೋಕನ.ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡಲು ಇಳಿದಿರುವ ಅಫ್ಘಾನಿಸ್ತಾನ ಎರಡನೇ ದಿನಕ್ಕೆ ಸೋಲನಭಿವಿಸಿದೆ. ಈ ಮೂಲಕ ಉಪಖಂಡದ ಪಿಚ್ ನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ದಿನಕ್ಕೆ ಅತೀ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಟೀಂ ಇಂಡಿಯಾ ಪಾಲಾಯ್ತು. ಒಂದೇ ಪಂದ್ಯದಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನದ 24 ವಿಕೆಟ್ ಕಬಳಿಸಿದೆ.