ಟೀಂ ಇಂಡಿಯಾ ಕ್ರಿಕೆಟಿಗರ ಅರೆನಗ್ನ ದೇಹ ಪ್ರದರ್ಶನ!

ಆಂಟಿಗುವಾ| Krishnaveni K| Last Modified ಬುಧವಾರ, 21 ಆಗಸ್ಟ್ 2019 (10:45 IST)
ಆಂಟಿಗುವಾ: ವೆಸ್ಟ್ ಇಂಡೀಸ್ ದ್ವೀಪ ರಾಷ್ಟ್ರಕ್ಕೆ ಕ್ರಿಕೆಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರು ತಮಗೆ ಸಿಕ್ಕ ಬಿಡುವಿನ ಅವಧಿಯನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ.

 
ಕ್ರಿಕೆಟ್ ಅಭ್ಯಾಸಕ್ಕಿಂತ ಕ್ರಿಕೆಟಿಗರು ಸುತ್ತಾಡುವುದರಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ವಿಂಡೀಸ್ ಕ್ರಿಕೆಟಿಗರ ಜತೆ ಟೀಂ ಇಂಡಿಯಾ ಕ್ರಿಕೆಟಿಗರ ಸುತ್ತಾಟದ ಫೋಟೋ ವೈರಲ್ ಆಗಿತ್ತು.
 
ಈಗ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಸ್ವಿಮ್ಮಿಂಗ್ ಪೂಲ್ ನಲ್ಲಿ ಮಸ್ತ್ ಮಜಾ ಮಾಡಿಕೊಂಡ ಅರೆನಗ್ನರಾಗಿ ಪೋಸ್ ಕೊಟ್ಟಿರುವ ಫೋಟೋವನ್ನು ಸ್ವತಃ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ ಸ್ಟಾಂಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಸಾಲಾಗಿ ನಿಂತು ಟೀಂ ಇಂಡಿಯಾ ಕ್ರಿಕೆಟಿಗರ ದೇಹ ಪ್ರದರ್ಶನದ ಫೋಟೋಗೆ ಕೆಲವರು ಲೈಕ್ ಕೊಟ್ಟಿದ್ದರೆ ಇನ್ನು ಕೆಲವರು ಟೀಕೆಯನ್ನೂ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :