ಸಿಡ್ನಿ|
Krishnaveni K|
Last Modified ಸೋಮವಾರ, 4 ಜನವರಿ 2021 (09:54 IST)
ಸಿಡ್ನಿ: ಮೂರನೇ ಟೆಸ್ಟ್ ಆಡಲು ಮೆಲ್ಬೋರ್ನ್ ನಿಂದ ಸಿಡ್ನಿಗೆ ತೆರಳುವ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಕೊರೋನಾ ಪರೀಕ್ಷೆಗೊಳಗಾಗಿದ್ದಾರೆ.
ಇಂದು ಸಿಡ್ನಿಗೆ ತೆರಳುವ ಮೊದಲು ಕ್ರಿಕೆಟಿಗರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೂ ನೆಗೆಟಿವ್ ವರದಿ ಬಂದಿದೆ. ರೋಹಿತ್ ಶರ್ಮಾ ಸೇರಿದಂತೆ ಐವರು ಕ್ರಿಕೆಟಿಗರು ನಿಯಮ ಮುರಿದು ರೆಸ್ಟೋರೆಂಟ್ ನಲ್ಲಿ ಊಟಕ್ಕೆ ತೆರಳಿದ ಘಟನೆಯಿಂದಾಗಿ ಟೀಂ ಇಂಡಿಯಾದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈಗ ಎಲ್ಲರೂ ನೆಗೆಟಿವ್ ವರದಿಯಿಂದ ನಿರಾಳವಾಗಿದ್ದಾರೆ.