ತಿರುವನಂತಪುರಂ: ಟೀಂ ಇಂಡಿಯಾ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಇದೀಗ ತಮ್ಮ ರಾಜ್ಯ ತಂಡದ ನಾಯಕನ ವಿರುದ್ಧ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ಸಂಜು ಸ್ಯಾಮ್ಸನ್ ಸೇರಿದಂತೆ 13 ಕ್ರಿಕೆಟಿಗರು ಕೇರಳ ನಾಯಕ ಸಚಿನ್ ಬೇಬಿ ವಿರುದ್ಧ ನಾಯಕನ ಘನತೆಗೆ ಕುತ್ತು ತರುವಂತೆ ಮಾತನಾಡಿದ್ದಾರೆಂದು ಆರೋಪಿಸಿ ಕೇರಳ ಕ್ರಿಕೆಟ್ ಅಸೋಸಿಯೇಷನ್ ಶಿಕ್ಷೆ ವಿಧಿಸಿದೆ.ಇವರಲ್ಲಿ ಐವರು ಆಟಗಾರರನ್ನು ಮುಂದಿನ ಐದು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ. ಸಂಜು ಸ್ಯಾಮ್ಸನ್ ಸೇರಿದಂತೆ ಉಳಿದ ಆಟಗಾರರಿಗೆ ಬಿಸಿಸಿಐ ನೀಡುವ ಪಂದ್ಯದ