ಮುಂಬೈ: ಮುಂಬರುವ ವಿಶ್ವಕಪ್ ಕ್ರಿಕೆಟ್ ಇಂಗ್ಲೆಂಡ್ ನಲ್ಲಿ 2019 ರಲ್ಲಿ ನಡೆಯಲಿದ್ದು, ಈ ವೇಳೆ ತಮಗೆ ಯಾವೆಲ್ಲಾ ಸೌಲಭ್ಯ ಬೇಕೆಂದು ಟೀಂ ಇಂಡಿಯಾ ಕ್ರಿಕೆಟಿಗರು ಬಿಸಿಸಿಐ ಆಡಳಿತ ಮಂಡಳಿ ಎದುರು ಬೇಡಿಕೆಯ ಪಟ್ಟಿ ಮುಂದಿಟ್ಟಿದ್ದಾರೆ. ಇದರಲ್ಲಿ ಸಾಕಷ್ಟು ಬಾಳೆಹಣ್ಣುಗಳು ಬೇಕು ಎಂದೂ ಇದೆ! ಪ್ರವಾಸದುದ್ದಕ್ಕೂ ತಮ್ಮ ಜತೆಗೆ ಪತ್ನಿಯರನ್ನೂ ಕರೆದೊಯ್ಯಲು ಅವಕಾಶ ಕೊಡಬೇಕು. ಜತೆಗೆ ರೈಲು ಪ್ರಯಾಣ ಮಾಡಲು ಟಿಕೆಟ್ ಮುಂಗಡ ಕಾಯ್ದಿರಿಸಬೇಕು ಎಂದು ಕ್ರಿಕೆಟಿಗರು ಆಡಳಿತ ಮಂಡಳಿ