ಗಾಯಾಳುಗಳ ಗೂಡಾಗಿದ್ದರೂ ಹೋರಾಟ ಕೈ ಬಿಡದ ಟೀಂ ಇಂಡಿಯಾ

ಸಿಡ್ನಿ| Krishnaveni K| Last Modified ಸೋಮವಾರ, 11 ಜನವರಿ 2021 (10:00 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಗೆಲುವಿನ ಗುರಿಯ ಬೆನ್ನತ್ತುವುದರ ಜೊತೆಗೆ ಗಾಯಾಳುಗಳನ್ನು ನಿಭಾಯಿಸುವ ಚಿಂತೆಯಲ್ಲಿದೆ.
 

ಐದನೇ ದಿನದಾಟದಲ್ಲಿ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿದೆ. ಗೆಲುವಿಗೆ ಭಾರತ ಇನ್ನೂ 127 ರನ್ ಗಳಿಸಬೇಕಿದೆ. ಭಾರತಕ್ಕೆ ಇನ್ನು ಬ್ಯಾಟ್ಸ್ ಮನ್ ಗಳ ಬಲವಿಲ್ಲ. ಇದೀಗ ರವಿಚಂದ್ರನ್ ಅಶ್ವಿನ್ 7 ರನ್ ಮತ್ತು ಹನುಮ ವಿಹಾರಿ 4 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು, ರವೀಂದ್ರ ಜಡೇಜಾ ಅನಿವಾರ್ಯವಾದರೆ ಎಂದು ನೋವು ನಿವಾರಕ ಸೇವಿಸಿ ಬ್ಯಾಟಿಂಗ್ ಗೆ ಸಿದ್ಧರಾಗಿದ್ದಾರೆ. ಈಗ ಬ್ಯಾಟಿಂಗ್ ಮಾಡುತ್ತಿರುವ ಹನುಮ ವಿಹಾರಿ ಕೂಡಾ ಸ್ನಾಯು ಸೆಳೆತದಿಂದ ಕುಂಟುತ್ತಲೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಉಳಿದವರಲ್ಲಿ ಬ್ಯಾಟಿಂಗ್ ಸಾಮರ್ಥ್ಯವಿಲ್ಲ. ಹೀಗಾಗಿ ಭಾರತಕ್ಕೆ ಈಗ ಸೋಲು ತಪ್ಪಿಸಿಕೊಳ್ಳುವುದೇ ಚಿಂತೆಯಾಗಿದೆ.
ಇದರಲ್ಲಿ ಇನ್ನಷ್ಟು ಓದಿ :