ಟೀಂ ಇಂಡಿಯಾ ಇಬ್ಬಾಗ! ರೋಹಿತ್-ಕೊಹ್ಲಿ ಬಳಗದ ಒಳಗೇ ನಡೀತಿದೆ ವಾರ್!

ಮುಂಬೈ, ಶನಿವಾರ, 13 ಜುಲೈ 2019 (10:32 IST)

ಮುಂಬೈ: ವಿಶ್ವಕಪ್ ಸೋಲಿನ ಬಳಿಕ ಟೀಂ ಇಂಡಿಯಾ ಈಗ ಒಡೆದ ಮನೆಯಂತಾಗಿದೆ ಎಂದು ಹಿಂದಿ ದೈನಿಕವೊಂದು ವರದಿ ಮಾಡಿದೆ.


 
ಟೀಂ ಇಂಡಿಯಾದಲ್ಲಿ ಉಪನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಎರಡು ಬಣ ಶುರುವಾಗಿದೆ. ಇದರಲ್ಲಿ ರೋಹಿತ್ ಬಣ ವಿರಾಟ್ ಮತ್ತು ಕೋಚ್ ರವಿಶಾಸ್ತ್ರಿ ವಿರುದ್ಧ ಅಸಮಾಧಾನ ಹೊಂದಿದೆ ಎಂದು ವರದಿಯಾಗಿದೆ.
 
ಕೊಹ್ಲಿ ಮತ್ತು ರವಿಶಾಸ್ತ್ರಿಗೆ ಬಿಸಿಸಿಐನ ಆಡಳಿತ ಮಂಡಳಿ ವಿನೋದ್ ರಾಯ್ ಬೆಂಬಲವಿದೆ. ಹೀಗಾಗಿ ಇಬ್ಬರೂ ತಮಗಿಷ್ಟ ಬಂದ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮ್ಮ ಇಷ್ಟದ ಆಟಗಾರರಿಗೇ ಅವಕಾಶ ಕೊಡುತ್ತಾರೆ. ರೋಹಿತ್ ಮತ್ತು ಜಸ್ಪ್ರೀತ್ ಬುಮ್ರಾ ಹೊರತಾಗಿ ಉಳಿದೆಲ್ಲಾ ಆಟಗಾರರನ್ನು ತಮಗಿಷ್ಟ ಬಂದ ಹಾಗೆ ಬದಲಾಯಿಸುತ್ತಾರೆ. ಈ ವೇಳೆ ತಂಡದ ಇತರ ಆಟಗಾರರ ಅಭಿಪ್ರಾಯವನ್ನು ಕಿವಿ ಮೇಲೂ ಹಾಕಿಕೊಳ್ಳುವುದಿಲ್ಲ ಎನ್ನಲಾಗಿದೆ.
 
ಒಂದು ವೇಳೆ ಇಬ್ಬರು ಸ್ಪಿನ್ನರ್ ಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡಬೇಕಾದ ಸಂದರ್ಭ ಬಂದರೆ ಆರ್ ಸಿಬಿ ತಂಡದ ಜತೆಗಾರ ಯಜುವೇಂದ್ರ ಚಾಹಲ್ ರನ್ನೇ ಕೊಹ್ಲಿ ಆಯ್ಕೆ ಮಾಡುತ್ತಾರೆ. ಕೆಎಲ್ ರಾಹುಲ್ ತಮ್ಮ ನಿಕಟವರ್ತಿ ಎನ್ನುವ ಕಾರಣಕ್ಕೆ ಫಾರ್ಮ್ ನಲ್ಲಿಲ್ಲದಿದ್ದರೂ ಅವಕಾಶ ಕೊಡುತ್ತಾರೆ. ರೋಹಿತ್ ಜತೆಗೆ ಗುರುತಿಸಿಕೊಂಡ ಆಟಗಾರರಿಗೆ ಅವಕಾಶವೇ ಸಿಗುವುದಿಲ್ಲ. ಇದು ತಂಡವನ್ನು ಇಬ್ಬಾಗ ಮಾಡಿದೆ. ಕೋಚ್ ಮತ್ತು ನಾಯಕನ ಮೇಲೆ ರೋಹಿತ್ ಬಣ ತೀವ್ರ ಅಸಮಾಧಾನ ಹೊಂದಿದೆ ಎಂದು ತಂಡದ ಮೂಲಗಳ ಹೇಳಿಕೆ ಆಧರಿಸಿ ಪತ್ರಿಕೆ ವರದಿ ಮಾಡಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಗೆ ನಂ.7 ಕ್ರಮಾಂಕದ ಬ್ಯಾಟಿಂಗ್ ನೀಡಿದ್ದಕ್ಕೆ ಕೊಹ್ಲಿ, ರವಿಶಾಸ್ತ್ರಿಗೆ ಬಿಸಿಸಿಐ ಕ್ಲಾಸ್

ಲಂಡನ್: ವಿಶ್ವಕಪ್ ಸೆಮಿಫೈನಲ್ ನಲ್ಲಿ ತಂಡ ಸಂಕಷ್ಟದಲ್ಲಿರುವಾಗ ಧೋನಿಯಂತಹ ಹಿರಿಯ ಅನುಭವಿ ಆಟಗಾರನನ್ನು ...

news

ವಿಂಡೀಸ್ ಸರಣಿಗೆ ಧೋನಿ ಆಯ್ಕೆಯಾಗಲ್ಲ? ನಿವೃತ್ತಿ ಘೋಷಣೆ ಸಾಧ್ಯತೆ!

ಮುಂಬೈ: ವಿಶ್ವಕಪ್ ಸೋಲಿನಿಂದ ಹೊರಬರುವ ಮೊದಲೇ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಟಿ20, ಏಕದಿನ ...

news

ವಿಶ್ವಕಪ್ ಸೋಲಿನ ಬಳಿಕವೂ ಮ್ಯಾಂಚೆಸ್ಟರ್ ನಲ್ಲಿಯೇ ಉಳಿದುಕೊಂಡಿರುವ ಟೀಂ ಇಂಡಿಯಾ

ಲಂಡನ್: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಮೇಲೂ ಟೀಂ ಇಂಡಿಯಾ ಮ್ಯಾಂಚೆಸ್ಟರ್ ನಲ್ಲಿಯೇ ಉಳಿದುಕೊಂಡಿದ್ದು, ...

news

ವಿಶ್ವಕಪ್ ಸೋಲಿನ ಬಳಿಕ ಕೋಚ್ ರವಿಶಾಸ್ತ್ರಿ ಜತೆ ವಿರಾಟ್ ಕೊಹ್ಲಿ ಕಿತ್ತಾಟ?!

ಲಂಡನ್: ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೇರವಾಗಿ ...