ವಿಶಾಖಪಟ್ಟಣ: ಶ್ರೀಲಂಕಾ ವಿರುದ್ಧ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದರೂ ಅಚ್ಚರಿಯೆಂಬಂತೆ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಇದಕ್ಕೆ ಸಮರ್ಥನೆ ಕೊಟ್ಟಿರುವ ನಾಯಕ ರೋಹಿತ್ ಶರ್ಮಾ ಹಗಲು ರಾತ್ರಿ ಪಂದ್ಯ ನಡೆಯುತ್ತಿರುವುದರಿಂದ ಇಬ್ಬನಿ ಪ್ರಧಾನ ಪಾತ್ರ ವಹಿಸಬಹುದೆಂದು ಫೀಲ್ಡಿಂಗ್ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದಾರೆ.ದ್ವಿತೀಯ ಸರದಿಯಲ್ಲಿ ಇಬ್ಬನಿ ಬೀಳುವಾಗ ಬೌಲಿಂಗ್ ನಡೆಸುವುದು ಕಷ್ಟವಾಗುತ್ತದೆ. ಬಾಲ್ ಮೇಲೆ ನಿಯಂತ್ರಣ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಭಾರತ ಬೌಲಿಂಗ್