ಮುಂಬೈ: ಮಹತ್ವದ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಅದಕ್ಕೆ ಮೊದಲು ಟೀಂ ಇಂಡಿಯಾಗಿದ್ದ ದೊಡ್ಡ ತಲೆನೋವೊಂದು ಮರೆಯಾಗಿದೆ.ಕಳೆದ ಕೆಲವು ದಿನಗಳಿಂದ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಆರಂಭಿಕ ಶಿಖರ್ ಧವನ್ ವಿಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ ಫಾರ್ಮ್ ಗೆ ಮರಳಿರುವುದರಿಂದ ಆ ಚಿಂತೆಯೇನೋ ಮರೆಯಾಗಿದೆ.ಆದರೆ ಕೆಎಲ್ ರಾಹುಲ್ ಇನ್ನೂ ಫಾರ್ಮ್ ಕಂಡುಕೊಳ್ಳದೇ ಇರುವುದು ಸಮಸ್ಯೆಯಾಗಿದೆ. ಆಸ್ಟ್ರೇಲಿಯಾ ಸರಣಿಗೆ ವಿರಾಟ್ ಕೊಹ್ಲಿ ತಂಡಕ್ಕೆ ಮರಳುತ್ತಾರೆ.