ಭಾರತದ ಸರಣಿಗೆ ಆಸ್ಟ್ರೇಲಿಯಾ ಪರ ಆಡಲಿರುವ ಟೀಂ ಇಂಡಿಯಾ ಮಾಜಿ ಸ್ಪಿನ್ನರ್!

Sydney| Krishnaveni K| Last Modified ಮಂಗಳವಾರ, 17 ಜನವರಿ 2017 (11:10 IST)
ಸಿಡ್ನಿ: ಭಾರತದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಗಂಭೀರವಾಗಿ ತಯಾರಿ ನಡೆಸುತ್ತಿದೆ. ಇದೀಗ ಭಾರತಕ್ಕೆ ಆಗಮಿಸಲಿರುವ ಆಸೀಸ್ ತಂಡದೊಂದಿಗೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಶ್ರೀರಾಮ್
ಶ್ರೀಧರನ್ ಕೂಡಾ ಇರಲಿದ್ದಾರೆ!ಅರೇ ಇದೇನಿದು ಎಂದು ಅಂದುಕೊಳ್ಳಬೇಡಿ. ಅಂದ ಹಾಗೆ ಆಸೀಸ್ ತಂಡದೊಂದಿಗೆ ಶ್ರೀಧರನ್ ಆಡುವುದೇನೋ ನಿಜ. ಆದರೆ ಟೆಸ್ಟ್ ಪಂದ್ಯದಲ್ಲಲ್ಲ. ಅಭ್ಯಾಸ ನಡೆಸುವಾಗ ಆಸೀಸ್ ನ್ನರಿಗೆ ಸ್ಪಿನ್ ಪಾಠ ಹೇಳಿಕೊಡಲಿದ್ದಾರೆ. ಕೇವಲ ಶ್ರೀಧರನ್ ಮಾತ್ರವಲ್ಲ, ಇಂಗ್ಲೆಂಡ್ ನ ಮಾಜಿ ಸ್ಪಿನ್ನರ್ ಮಾಂಟಿ ಸ್ಪಿನ್ನರ್ ಕೂಡಾ ಸಹಾಯಕರಾಗಲಿದ್ದಾರೆ.ಅಲ್ಲಿಗೆ ನಾಲ್ವರು ಸ್ಪಿನ್ ಬೌಲರ್ ಗಳ ತಂಡಕ್ಕೆ ಇಬ್ಬರು ಸ್ಪಿನ್ ಸಲಹೆಗಾರರು ಅಂದಾಯ್ತು. ಭಾರತದಲ್ಲಿ ಸ್ಪಿನ್ ಪಿಚ್ ಎನ್ನುವ ಕಾರಣಕ್ಕೆ, ಆಸ್ಟ್ರೇಲಿಯಾ ಸ್ಪಿನ್ನರ್ ಗಳ ಗುಂಪೇ ಕಟ್ಟಿಕೊಂಡು ಬರುತ್ತಿದೆ. ಭಾರತದ ಸ್ಪಿನ್ ಬೌಲರ್ ಗಳನ್ನು ಎದುರಿಸುವುದು ಹೇಗೆ, ಸ್ಪಿನ್ ಬೌಲಿಂಗ್ ಹೇಗೆ ಮಾಡಬೇಕು ಎಂದು ಆಸೀಸ್ ತಂಡದವರಿಗೆ ಇವರಿಬ್ಬರೂ ವಿಶೇಷವಾಗಿ ಪಾಠ ಹೇಳಿಕೊಡಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :