ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಮೇಲಿನ ಅಭಿಮಾನದಿಂದ ಅವರು ಹೋಟೆಲ್ ನಲ್ಲಿ ಊಟ ಮಾಡಿದ ಬಿಲ್ ಅವರಿಗೇ ಅರಿವಿಲ್ಲದಂತೇ ಪಾವತಿಸಿದೆ ಎಂದು ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಪುರಾವೆಯಾಗಿ ಅವರು ಪಾವತಿಸಿದ ಬಿಲ್ ಹಾಗೂ ಪಕ್ಕದ ಟೇಬಲ್ ನಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ವಿಡಿಯೋವನ್ನೂ ಫೋಟೋ ಸಮೇತ ಪ್ರಕಟಿಸಿದ್ದಾರೆ. ಆದರೆ ನವಲ್ದೀಪ್ ಸಿಂಗ್ ಎಂಬ ಈ ಅಭಿಮಾನಿ ತಮ್ಮ ಫೋಟೋವನ್ನು ಮಾತ್ರ ಎಲ್ಲೂ ಪ್ರಕಟಿಸಿಲ್ಲ. ತಾನು