ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನವೇ ಮಳೆ ಅಡ್ಡಿಯಾಗಿದ್ದು, ಐಸಿಸಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುವಂತಾಗಿದೆ. ಈ ತಂತ್ರಜ್ಞಾನದ ಯುಗದಲ್ಲಿ ಮಳೆ ಬರುವ ಸೂಚನೆ ಮೊದಲೇ ಐಸಿಸಿಗೆ ತಿಳಿದಿರಲಿಲ್ವಾ? ಇಂತಹ ವಾತಾವರಣದಲ್ಲಿ ಈ ಮೈದಾನದಲ್ಲಿ ಪಂದ್ಯ ಆಯೋಜಿಸಿದ್ದೇಕೆ ಎಂದು ಅಭಿಮಾನಿಗಳು ಐಸಿಸಿಗೆ ಹಿಡಿಶಾಪ ಹಾಕಿದ್ದಾರೆ.ಕಳೆದ ಎರಡು ವರ್ಷಗಳಿಂದ ಕಾದಿದ್ದ ಪಂದ್ಯವಿದು. ಆದರೆ ಅದರ ಸಂತೋಷವನ್ನು ಮಳೆ ಹಾಳು