ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 10 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪಂದ್ಯ ಎರಡೇ ದಿನದೊಳಗೆ ಮುಗಿದೇ ಹೋಗಿದೆ. ಸಂಪೂರ್ಣವಾಗಿ ಬೌಲರ್ ಗಳಿಗೆ ಅದರಲ್ಲೂ ಸ್ಪಿನ್ನರ್ ಗಳಿಗೆ ಸಹಕರಿಸುತ್ತಿದ್ದ ಪಿಚ್ ನಲ್ಲಿ ಹೆಚ್ಚು ಲಾಭ ಪಡೆದಿದ್ದು ರವಿಚಂದ್ರನ್ ಅಶ್ವಿನ್ ಮತ್ತು ಅಕ್ಸರ್ ಪಟೇಲ್. ಇಂಗ್ಲೆಂಡ್ ನ್ನು ಕಟ್ಟಿ ಹಾಕಲು ಭಾರತಕ್ಕೆ ಇವರಿಬ್ಬರೇ ಸಾಕಾಯ್ತು. ಇಡೀ ಪಂದ್ಯದಲ್ಲೇ ಇವರಿಬ್ಬರದ್ದೇ ಶೋ