ಟೆಸ್ಟ್ ವಿಶ್ವಕಪ್ ನಲ್ಲಿ ಟೀಂ ಇಂಡಿಯಾಕ್ಕೆ 200 ಅಂಕ

ಪುಣೆ, ಸೋಮವಾರ, 14 ಅಕ್ಟೋಬರ್ 2019 (09:14 IST)

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಮತ್ತು 137 ರನ್ ಗಳ ಜಯ ಸಾಧಿಸುವುದರೊಂದಿಗೆ ಸರಣಿ ತನ್ನದಾಗಿಸಿಕೊಂಡಿದೆ. ಜತೆಗೆ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 200 ನೇ ಅಂಕ ಸಂಪಾದಿಸಿದೆ.
 


ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಸರಣಿ ಆಡಿದ್ದ ಭಾರತ ಎರಡೂ ಪಂದ್ಯಗಳನ್ನು ಗೆದ್ದು ಪೂರ್ಣ ಅಂಕ ಸಂಪಾದಿಸಿತ್ತು. ಇದೀಗ ಮತ್ತೆ ದ.ಆಫ್ರಿಕಾ ವಿರುದ್ಧ ಗೆಲ್ಲುವುದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು.
 
ಅಲ್ಲದೆ ತವರಿನಲ್ಲಿ ಸತತ 11 ನೇ ಸರಣಿ ಜಯ ಗಳಿಸಿ ದಾಖಲೆ ಮಾಡಿತು. ಇದು ವಿಶ್ವದಾಖಲೆಯಾಗಿದೆ. ಇದಕ್ಕೂ ಮೊದಲು 10 ಸತತ ಸರಣಿ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಜತೆ ಜಂಟಿಯಾಗಿ ಅಗ್ರಸ್ಥಾನದಲ್ಲಿತ್ತು. ಜತೆಗೆ 50 ನೇ ಟೆಸ್ಟ್ ಪಂದ್ಯಕ್ಕೆ ನಾಯಕರಾಗಿದ್ದ ಕೊಹ್ಲಿಗೆ ಸಿಕ್ಕ 30 ನೇ ಗೆಲುವು ಇದಾಗಿತ್ತು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕಾಲಿಗೆ ಬಿದ್ದ ಅಭಿಮಾನಿ: ಜಾರಿ ಬಿದ್ದ ರೋಹಿತ್ ಶರ್ಮಾ!

ಪುಣೆ: ಕ್ರಿಕೆಟ್ ಪಂದ್ಯವಾಗುವಾಗ ಅನೇಕ ಬಾರಿ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ದಾಂಧಲೆ ಎಬ್ಬಿಸುವ ...

news

ಭುಜದ ಗಾಯದ ನಡುವೆಯೂ ಆಡಿ ದ.ಆಫ್ರಿಕಾ ಮಾನ ಕಾಪಾಡಿದ ಕೇಶವ್ ಮಹಾರಾಜ್

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದರೂ ದ.ಆಫ್ರಿಕಾ ಬೌಲರ್ ...

news

ದ.ಆಫ್ರಿಕಾ ವಿರುದ್ಧ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ತೃತೀಯ ದಿನ ಟೀಂ ಇಂಡಿಯಾ ಸ್ಪಿನ್ನರ್ ...

news

ಮತ್ತೊಂದು ಗೆಲುವಿನ ಸನಿಹ ಟೀಂ ಇಂಡಿಯಾ

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ...