ಮುಂಬೈ: ಕಳೆದ ಒಂಭತ್ತು ತಿಂಗಳ ಅವಧಿಯಲ್ಲಿ ಟೀಂ ಇಂಡಿಯಾಗೆ ಇಷ್ಟು ವರ್ಷಗಳಿಂದ ಇಲ್ಲದಷ್ಟು ನಾಯಕರು ಬಂದು ಹೋಗಿದ್ದಾರೆ.ಇತ್ತೀಚೆಗೆ ಆಟಗಾರರು ಬಿಡಿ, ನಾಯಕರೇ ಸ್ಥಿರವಾಗಿ ಟೀಂ ಇಂಡಿಯಾದಲ್ಲಿ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾಯಕರು ಬದಲಾಗುತ್ತಿದ್ದಾರೆ. ಇದೀಗ ಡರ್ಬಿಶೈರ್ ವಿರುದ್ಧ ಟಿ20 ಅಭ್ಯಾಸ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ನಾಯಕರಾಗುವ ಮೂಲಕ ದ್ರಾವಿಡ್ ಕೋಚ್ ಆಗಿ ಬಂದ ಮೇಲೆ 8 ನೇ ನಾಯಕನ ನಿಯುಕ್ತಿಯಾಗಿದೆ.ಖಾಯಂ ನಾಯಕ ಯಾರು ಎಂಬುದೇ ಈಗ ಜನಕ್ಕೆ ಮರೆತು ಹೋಗುವಂತಾಗಿದೆ.