ಆಕ್ಲೆಂಡ್: ಭಾರತೀಯ ಕ್ರಿಕೆಟಿಗರು ಎಲ್ಲೇ ಹೋದರೂ ಅಭಿಮಾನಿಗಳು ಅಲ್ಲೆಲ್ಲಾ ಹಿಂಬಾಲಿಸುತ್ತಾರೆ ಎಂಬುದಕ್ಕೆ ನಿನ್ನೆ ನಡೆದ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಸಾಕ್ಷಿಯಾಗಿತ್ತು.ನ್ಯೂಜಿಲೆಂಡ್ ನಲ್ಲಿ ಪಂದ್ಯ ನಡೆಯುತ್ತಿದ್ದರೂ ಪ್ರೇಕ್ಷಕರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ತವರಿನಲ್ಲೇ ಆಡುವ ಅನುಭವ ನೀಡಿದ್ದಾರೆ. ಭಾರತದಲ್ಲಿ ಆಡುತ್ತಿರುವಾಗ ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಟೀಂ ಇಂಡಿಯಾ ಕ್ರಿಕೆಟಿಗರ ಹೆಸರೆತ್ತಿ ಕೂಗಿ ಹುರಿದುಂಬಿಸುತ್ತಿರುತ್ತಾರೆ.ಅದೇ ರೀತಿ ಇಲ್ಲಿಯೂ ಮೈದಾನದಲ್ಲಿದ್ದ ಪ್ರೇಕ್ಷಕರ ಪೈಕಿ ಹೆಚ್ಚಿನವರು ಭಾರತೀಯ ಸಮರ್ಥಕರಾಗಿದ್ದರು! ಈ ಬಗ್ಗೆ