ಕೊಲೊಂಬೊ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ತ್ರಿಕೋನ ಟಿ20 ಸರಣಿ ಫೈನಲ್ ಪಂದ್ಯದಲ್ಲಿ ಲಂಕಾ ಅಭಿಮಾನಿಗಳು ಭಾರತೀಯ ಅಭಿಮಾನಿಗಳಿಗಿಂತ ಹೆಚ್ಚು ಟೀಂ ಇಂಡಿಯಾಕ್ಕೆ ಚಿಯರ್ ಅಪ್ ಮಾಡುತ್ತಿದ್ದರು. ಇದಕ್ಕೆ ಕಾರಣವೂ ಇದೆ. ಕೊನೆಯ ಲೀಗ್ ಪಂದ್ಯದಲ್ಲಿ ಲಂಕಾ ಕ್ರಿಕೆಟಿಗರೊಂದಿಗೆ ಗೆಲುವಿನ ಹೊಸ್ತಿಲಲ್ಲಿ ಕಾದಾಡಿ ಪಂದ್ಯವನ್ನೇ ಬಹಿಷ್ಕರಿಸಲು ಬಾಂಗ್ಲಾ ಆಟಗಾರರು ಸಜ್ಜಾಗಿದ್ದರು. ಅಷ್ಟೇ ಅಲ್ಲ, ಸಮಾಧಾನಿಸಲು ಬಂದ ಲಂಕಾ ನಾಯಕನ ಮೇಲೆ ಹರಿಹಾಯ್ದಿದ್ದರು. ಇದಾದ ಬಳಿಕ ಡ್ರೆಸ್ಸಿಂಗ್ ರೂಂ