ಧರ್ಮಶಾಲಾಗೆ ಬಂದಿಳಿದ ಟೀಂ ಇಂಡಿಯಾ

ಧರ್ಮಶಾಲಾ| Krishnaveni K| Last Modified ಶನಿವಾರ, 14 ಸೆಪ್ಟಂಬರ್ 2019 (13:27 IST)
ಧರ್ಮಶಾಲಾ: ದ.ಆಫ್ರಿಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯವಾಡಲು ಟೀಂ ಇಂಡಿಯಾ ನಿನ್ನೆಯೇ ಧರ್ಮಶಾಲಾಗೆ ಬಂದಿಳಿದಿದೆ.
 

ಗುರುವಾರ ನವದೆಹಲಿಯಲ್ಲಿ ನಡೆದ ಫಿರೋಜ್ ಶಾ ಕೋಟ್ಲಾ ಮೈದಾನ ಮರುನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಧರ್ಮಶಾಲಾಗೆ ಪ್ರಯಾಣ ಬೆಳೆಸಿದ್ದಾರೆ.
 
ಧರ್ಮಶಾಲಾಗೆ ಬಂದಿಳಿದ ಕ್ರಿಕೆಟಿಗರಿಗೆ ಇಲ್ಲಿನ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ಕೋರಲಾಯಿತು. ಇಲ್ಲಿನ ಸಾಂಪ್ರದಾಯಿಕ ಟೋಪಿ, ಹಾರದ ಜತೆಗೆ ಹಣೆಗೆ ತಿಲಕವಿಟ್ಟು ಸ್ವಾಗತಿಸಲಾಯಿತು. ಟಿ20 ಸರಣಿಯ ಕೊನೆಯ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸರಣಿ ಮುಗಿದ ಬಳಿಕ ಟೆಸ್ಟ್ ಸರಣಿ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :