ನವದೆಹಲಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಪಂದ್ಯದಲ್ಲಿ ಈಗಾಗಲೇ ವಿಜೇತರು ಯಾರೆಂದು ತೀರ್ಮಾನವಾಗಿದೆ. ಹಾಗಿದ್ದರೂ ಟೀಂ ಇಂಡಿಯಾ ಪಾಲಿಗೆ ಈ ಪಂದ್ಯ ಮಹತ್ವದ್ದೇ ಆಗಿದೆ. ಸರಣಿ ಗೆದ್ದರೂ ಭಾರತ ತಂಡ ಇದುವರೆಗೆ ಸಂಘಟಿತ ಪ್ರದರ್ಶನ ನೀಡಿಲ್ಲ. ಪ್ರತೀ ಪಂದ್ಯದ ಗೆಲುವಿಗೂ ಒಬ್ಬರೋ, ಇಬ್ಬರೋ ಬ್ಯಾಟ್ಸ್ ಮನ್ ಗಳಷ್ಟೇ ಕೊಡುಗೆ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಗಳಿಸಿದ್ದು ಬಿಟ್ಟರೆ ಈ ಸರಣಿಯಲ್ಲಿ ಸರಾಗವಾಗಿ ರನ್ ಗಳಿಸಿದ್ದು