ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಈಗಾಗಲೇ ಆಸೀಸ್ ಸರಣಿ ಗೆದ್ದಿರುವ ಕಾರಣ ಇದು ಔಪಚಾರಿಕ ಪಂದ್ಯವಾಗಲಿದೆ. ಕಳೆದ ಎರಡೂ ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಟೀಂ ಇಂಡಿಯಾಕ್ಕೆ ಇಂದು ಗೆದ್ದು ಮಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ವಿಪರ್ಯಾಸವೆಂದರೆ ಕೊಹ್ಲಿಗೆ ಟಾಸ್ ನಿಂದಲೇ ದುರಾದೃಷ್ಟ ಹಿಂಬಾಲಿಸುತ್ತಿದೆ. ಎರಡೂ ಪಂದ್ಯಗಳಲ್ಲಿ ಟಾಸ್ ಸೋತು ಬೆಟ್ಟದಂತಾ ಮೊತ್ತ ಬೆನ್ನಟ್ಟುವ ಪರಿಸ್ಥಿತಿ ಕೊಹ್ಲಿ ಪಡೆಗೆ ಎದುರಾಗಿತ್ತು. ಬೌಲರ್ ಗಳ ವೈಫಲ್ಯ