ಮುಂಬೈ: ಐಪಿಎಲ್ ಬಿಟ್ಟರೆ ಕ್ರಿಕೆಟಿಗರಿಗೆ ಇನ್ನು ಉಳಿದಿರುವುದು ವಿಶ್ವಕಪ್ ಕೂಟ ಒಂದೇ. ಮಹತ್ವದ ಕೂಟಕ್ಕೆ ತಯಾರಾಗುತ್ತಿರುವ ಟೀಂ ಇಂಡಿಯಾಗೆ ಉಳಿದಿರುವುದು ಮೂರು ಚಿಂತೆ.ಆರಂಭಿಕರ ಅಸ್ಥಿರತೆ ಮೊದಲನೆಯದಾಗಿ ಟೀಂ ಇಂಡಿಯಾಗಿರುವ ದೊಡ್ಡ ತಲೆನೋವು ಆರಂಭಿಕರದ್ದು. ಆರಂಭಿಕರು ಒಂದು ಪಂದ್ಯದಲ್ಲಿ ಆಡಿದರೆ ಇನ್ನೊಂದು ಪಂದ್ಯದಲ್ಲಿ ಆಡುತ್ತಿಲ್ಲ. ಇದರಿಂದಾಗಿ ಭಾರತಕ್ಕೆ ಸ್ಥಿರ ಆರಂಭ ಸಿಗುತ್ತಿಲ್ಲ. ರೋಹಿತ್ ಶರ್ಮಾ, ಶಿಖರ್ ಧವನ್ ಫಾರ್ಮ್ ಅಸ್ಥಿರತೆಯೇ ಭಾರತಕ್ಕೆ ದೊಡ್ಡ ಚಿಂತೆಯಾಗಿದೆ.ನಂ.4 ಚಿಂತೆ ಬ್ಯಾಟಿಂಗ್ ಬಲಗೊಳ್ಳಬೇಕೆಂದರೆ ಮಧ್ಯಮ ಕ್ರಮಾಂಕ