ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆಲುವಿನ ಸಿಹಿ ಕಂಡಿದೆ. ಈ ಪಂದ್ಯದಲ್ಲಿ ಭಾರತೀಯರ ದಾಖಲೆಗಳೇನು ನೋಡೋಣ.ಟೀಂ ಇಂಡಿಯಾ ದ.ಆಫ್ರಿಕಾದಲ್ಲಿ ಸರಣಿ ಗೆದ್ದ ಉದಾಹರಣೆಯೇ ಇಲ್ಲ. ಅದೇ ರೀತಿ ಟೆಸ್ಟ್ ಪಂದ್ಯ ಗೆದ್ದಿರುವುದೂ ಅಪರೂಪ. ಇದು ಆಫ್ರಿಕನ್ನರ ನಾಡಿನಲ್ಲಿ ಟೀಂ ಇಂಡಿಯಾಗೆ ನಾಲ್ಕನೇ ಟೆಸ್ಟ್ ಗೆಲುವಾಗಿದೆ. ಅಲ್ಲದೆ, ಎರಡನೇ ದೊಡ್ಡ ಅಂತರದ ಗೆಲುವಾಗಿದೆ.2021 ನೇ ಸಾಲಿನಲ್ಲಿ ಟೀಂ ಇಂಡಿಯಾ ಏಷ್ಯಾದ ಹೊರತಾಗಿ